ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಹೆಣ್ಣು ಮಕ್ಕಳ ಚೂಡಿದಾರವನ್ನು ಹಾಕಿಕೊಂಡು ಭಯ ಹುಟ್ಟಿಸಿದ್ದು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ ಘಟನೆ ನಡೆದಿದ್ದು. ಹುಬ್ಬಳ್ಳಿಯ ಸಟ್ಲಿಮೆಂಟ್ ಏರಿಯಾದಲ್ಲಿ ನಿನ್ನೆ ತಡರಾತ್ರಿ ಯುವಕನೊಬ್ಬ ಹೆಣ್ಣು ಮಕ್ಕಳ ಚೂಡಿದಾರವನ್ನು ಹಾಕಿಕೊಂಡು ನಗರದಲ್ಲಿ ಓಡಾಡಿದ್ದರಿಂದ ಸಾರ್ವಜನಿಕರಲ್ಲಿ ಭಯ ಉಂಟು ಮಾಡಿತ್ತು ಆತನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.