ಕೊಡಂಕೂರು ಪರಿಸರದಲ್ಲಿ ಸಾರ್ವಜನಿಕ ಮನೆಗಳಿಗೆ ಪ್ರವೇಶಿಸುವುದು, ವಾಹನಗಳನ್ನು ಹತ್ತುವುದರ ಜೊತೆಗೆ ಆತಂಕ ಸೃಷ್ಠಿಸಿದ ಮಾನಸಿಕ ಅಸ್ವಸ್ಥ ಯುವಕನನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ. ಯುವಕ ಸಾಗರ್ (21 ವರ್ಷ) ತಂದೆ ಸುರೇಂದ್ರ ಮೂಲತಃ ಒಡಿಸ್ಸಾದವನೆಂಬ ಮಾಹಿತಿ ನೀಡಿದ್ದಾನೆ. ಕಾರ್ಮಿಕನಾಗಿ ಉಡುಪಿಗೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಯುವಕನ ವರ್ತನೆಯಿಂದ ಸ್ಥಳೀಯರಿಗೆ ಭಯದ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳೀಯ ನಗರ ಸಭಾ ಸದಸ್ಯೆ ಸಂಪಾವತಿ ನೆರವು ನೀಡುವಂತೆ ವಿಶುಶೆಟ್ಟಿಯವರಲ್ಲಿ ತಿಳಿಸಿದ್ದಾರೆ.