ಮೈಸೂರು: ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ ಇರುವ ವಿಚಿತ್ರ ಮೇಕೆ ಮರಿ ಜನನ. ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಘಟನೆ. ಕುರಹಟ್ಟಿ ಗ್ರಾಮದ ರೈತ ರವೀಶ್ ಎಂಬುವರಿಗೆ ಸೇರಿದ ಮೇಕೆ. ರವೀಶ್ ಮನೆಯಲ್ಲಿ ವಿಚಿತ್ರ ಮರಿಗೆ ಜನ್ಮ ನೀಡಿರುವ ಮೇಕೆ. ಎರಡು ಮರಿಗಳಿಗೆ ಜನ್ಮ ನೀಡಿರುವ ತಾಯಿ ಮೇಕೆ. ಮತ್ತೊಂದು ಮರಿಗೂ ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ, ಎರಡು ಬಾಯಿ. ದೇಹ ಮಾತ್ರ ಸಾಮಾನ್ಯವಾಗಿ ಇದ್ದು ಮೇಕೆ ಮರಿಯು ಆರೋಗ್ಯವಾಗಿದೆ. ಎರಡು ಬಾಯಿಯಿಂದಲೂ ಹಾಲು ಕುಡಿಯುತ್ತಿರುವ ಮೇಕೆ ಮರಿ. ವಿಷಯ ತಿಳಿಯುತ್ತಿದ್ದಂತೆ ವಿಚಿತ್ರವಾಗಿ ಜನಿಸಿರುವ ಮೇಕೆ ಮರಿ ನೋಡಲು ಆಗಮಿಸುತ್ತಿರುವ ಗ್ರಾಮಸ್ಥರು.