ಮೊಳಕಾಲ್ಮುರು:-ರಾಂಪುರ ಗ್ರಾಮದಲ್ಲಿ ಗುರುವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಅನ್ನ ಭಾಗ್ಯ ಯೋಜನೆಡಿ 10 ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎನ್ ವೈ ಪಿ ಚೇತನ್ ಚಾಲನೆ ನೀಡಿದರು,ಈ ವೇಳೆ ಮಾತನಾಡಿದ ಅವರು ಹಸಿವು ಮುಕ್ತ ಕರ್ನಾಟಕ ನಿರ್ಮಿಸುವ ಆಶಯದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜುಲೈ 9, 2023 ರಂದು ಅನ್ನಭಾಗ್ಯ ಯೋಜನೆಯನ್ನು ಗ್ರಾರಂಟಿ ಯೋಜನೆಯಾಗಿ ಪ್ರಾರಂಭಿಸಿತು.