ಆರ್.ಎಲ್ ಕಂಪನಿ ಮುಖ್ಯಸ್ಥ ಮೋಹನ್ ಕೃಷ್ಣ ವಿರುದ್ದ ಕ್ರಮಕ್ಕೆ ಕೋಳಿ ಸಾಕಾಣಿಕೆದಾರರಿಂದ ಡಿಸಿಗೆ ದೂರು. ಕೋಲಾರ: ಕೋಳಿ ಸಾಕಾಣಿಕೆದಾರರಿಗೆ ಆರ್.ಎಲ್ ಕಂಪನಿಯ ಮುಖ್ಯಸ್ಥ ಮೋಹನ್ ಕೃಷ್ಣ ಹಾಗೂ ಡಿಜಿಎಂ ಕರುಣಕರನ್ ಸೇರಿದಂತೆ ಇತರರು ಸೇರಿಕೊಂಡು ಜಿಸಿ ಹಣ ಕೊಡದೆ ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಕೋಳಿ ಸಾಕಾಣಿಕೆದಾರರ ಸಹಕಾರ ಸಂಘದಿಂದ ಬುಧವಾರ ಜಿಲ್ಲಾಧಿಕಾರಿ ಎಂ.ಆರ್ ರವಿ ಅವರಿಗೆ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜಕುಮಾರ್ ಮಾತನಾಡಿ ಕೋಳಿ ಸಾಕಾಣಿಕೆದಾರರಿಗೆ ಆರ್.ಎಲ್ ಕಂಪನಿಯಿಂದ ಒಂದುವರೆ ವರ್ಷದಿಂದ ಸುಮಾರು ೧೫ ರೈತರಿಗೆ ೩೧.೪೫ ಲಕ್ಷ ರೂಪಾಯಿಗಳನ್ನು ಕೊಡದೆ ವಂಚನೆ ಮಾಡಿದ್ದಾರೆ ಕೋಳಿ ಮರಿಗಳಿಗೆ ಒಂದನೆ ಬ್ಯಾಚ್, ಎರಡನೇ