ಹಾಸನ ಎಸ್ಪಿ ಮಹಮದ್ ಸುಜೀತಾ ವಿರುದ್ದ ಅಧಿಕಾರ ದುರುಪಯೋಗ ಆರೋಪಿಸಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿ ವಿಧಾನಸೌಧದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ದೂರುದಾರ ಜಿ. ದೇವರಾಜೆ ಗೌಡ ಅವರು, ಐಪಿಎಸ್ ಆಫೀಸರ್ ಮಹಮ್ಮದ್ ಸಜೀತಾ ಅವ್ರು, ಹಾಸನ ಎಸ್.ಪಿ ಆಗಿ ಕೆಲಸ ಮಾಡ್ತಿದ್ದಾರೆ. 25 ಸೆಪ್ಟೆಂಬರ್ ರಂದು ತಾಯಿಯ ಆರೋಗ್ಯ ಸರಿಯಿಲ್ಲ ಎಂದು ಹಾಸನದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಯಾರ ಅನುಮತಿ ಇಲ್ಲದೆ ಸರ್ಕಾರದ ಸುತ್ತೊಲೆ ಇಲ್ಲದೆ, ಹಾಸನದಿಂದ ಬೆಂಗಳೂರು ವರೆಗೂ ಝಿರೋ ಟ್ರಾಫಿಕ್ ಮಾಡಿಕೊಂಡು ಬಂದಿದ್ದಾರೆ.