ಚಿತ್ರದುರ್ಗ ಜಿಲ್ಲೆಯ ಹಿರೇಗುಂಟನೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿ ಗ್ರಾಮ ಪಂಚಾಯತಿ ಸದಸ್ಯನೇ ಉಪವಾಸ ಸತ್ಯಾಗ್ರಹ ಕುಳಿತಿರುವ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಉಪವಾಸ ಸತ್ಯಾಗ್ರಹ ಕುಳಿತಿದ್ದು, ಕೂಡಲೇ ಗ್ರಾಮ ಪಂಚಾಯತಿ ಅಕ್ರಮಗಳ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಅಕ್ರಮವಾಗಿ ಗ್ರಾಮಠಾಣಾ ಜಾಗವನ್ನ ಖಾತೆ ಮಾಡಿ ಈಸ್ವತ್ತು ಮಾಡಿದ್ದಾರೆ, ಖಾದಿ ಗ್ರಾಮೋದ್ಯೋಗ ಜಾಗ ಕೂಡಾ ಅಕ್ರಮ ಖಾತೆ ಮಾಡಲಾಗಿದ್ದು, ಖಾಸಗಿ ಲೇಔಟ್ ಗಳಿಗೆ ಗ್ರಾಮ ಠಾಣಾ ಜಾಗದಲ್ಲಿ ಡಾಂಬಾರು ರಸ್ತೆ ಮಾಡಲಾಗಿದೆ ಎಂದರು ಆರೋಪಿಸಿದರು. ಬಳಿಕ ಸ್ಥಳಕ್ಕೆ ಚಿತ್ರದುರ್ಗ ಇಓ ರವಿಕುಮಾರ್ ಭೇಟಿ ನೀಡಿದರು