ಆಟೋ ಪಲ್ಟಿ : ವ್ಯಕ್ತಿ ಮೃತ್ಯು ಬೀದರ್ : ಆಟೋ ಪಲ್ಟಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಧನ್ನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹಾಲಹಿಪ್ಪರಗಾ ಕ್ರಾಸ್ ಬಳಿ ನಡೆದಿದೆ. ಭಾಲ್ಕಿ ತಾಲ್ಲೂಕಿನ ದಾಡಗಿ ಗ್ರಾಮದ ನಿವಾಸಿ ವಿನೋದಕುಮಾರ್ (32) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇಂದು ಬೆಳಿಗ್ಗೆ ಭಾಲ್ಕಿ ಕಡೆಯಿಂದ ಬೀದರ್ ಕಡೆಗೆ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಆಟೋ ಪಲ್ಟಿಯಾಗಿದ್ದು, ವಿನೋದಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.