ದಾವಣಗೆರೆ ನಗರದಲ್ಲಿ ಮನೆಯ ಬೀಗಿ ಮುರಿದು ಕಳವು ಮಾಡಿದ್ದ ಅಂತರ್ ರಾಜ್ಯ ಕಳ್ಳರನ್ನು ಬಂಧಿಸಿರುವ ವಿದ್ಯಾನಗರ ಠಾಣೆಯ ಪೊಲೀಸರು 15.37 ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ನಗರದ ವಿನಾಯಕ ಬಡಾವಣೆಯಲ್ಲಿರುವ ರಂಗನಾಥ ಎಂಬವರು ಮನೆಯ ಬೀಗಿ ಹಾಕಿಕೊಂಡು ಬೆಂಗಳೂರಿಗೆ ಹೋದಾಗ ಕಳ್ಳರು ಕೃತ್ಯ ಎಸಗಿದ್ದಾರೆ. ಈ ಕುರಿತು ರಂಗನಾಥ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಳವು ಮಾಡಿದ್ದ ರಾಜಸ್ಥಾನ ಮೂಲದ ಶ್ಯಾಮ್ ಸಿಂಗ್, ಕಮರ್ ಪಾಲ್, ಪ್ರತಾಪ್ ಸಿಂಗ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬೆಳ್ಳಿ ಬಂಗಾರದ ಆಭರಣಗಳು, ಮೊಬೈಲ್, ನಗದು ಸೇರಿದಂತೆ ಒಟ್ಟು 15.37 ಲಕ್ಷ ರೂ ಸ್ವತ್ತು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದೆ.