ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಈರುಳ್ಳಿ ಬೆಳೆ ಕೆಟ್ಟುಹೋಗುತ್ತಿದ್ದು, ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಕೇಳುವವರಿಲ್ಲದಂತಾಗಿದೆ. ಸೆ.11 ರ ಗುರುವಾರ ಬೆಳಗ್ಗೆ 10 ಗಂಟೆಗೆ ಯಾದಗಿರಿ, ಮಕ್ತಲ್, ಚಂದ್ರಬಂಡ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದಿದ್ದ ಉಳ್ಳಾಗಡ್ಡಿಯನ್ನು ತಂದಿದ್ದ ರೈತರಿಗೆ ಭಾರಿ ನಿರಾಸೆ ಮೂಡಿಸಿತು. ಮಳೆಗೆ ಅಲ್ಪಸ್ವಲ್ಪ ಕೆಟ್ಟು ಹೋದ ಉಳ್ಳಾಗಡ್ಡಿ, ಮಾರುಕಟ್ಟೆಯಲ್ಲಿ ಸಂಪೂರ್ಣ ಬೆಲೆ ಕಳೆದುಕೊಂಡಿದೆ. ಉಳ್ಳಾಗಡ್ಡಿ ಗುಣಮಟ್ಟ ಸರಿಯಿಲ್ಲವೆಂದು ಖರೀದಿದಾರರು ಉಳ್ಳಾಗಡ್ಡಿ ಖರೀದಿಸಲು ಹಿಂದೇಟು ಹಾಕಿದ ಪರಿಣಾನ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಕೆಲವು ಖರೀದಿದಾರರು ಈರುಳ್ಳಿಯನ್ನು ಕ್ವಿಂಟಲ್ ಗೆ 400 ರೂಪಾಯಿಗೆ ಕೇಳಿದ ಕಾರಣ ಬೇಸತ್ತ ರೈತರು ಸಾರ್ವಜನಿಕರಿಗೆ ಉಚಿತವಾಗಿ ಉಳ್ಳಾಗಡ್ಡಿ ಕೊಡಲು ನಿ