Download Now Banner

This browser does not support the video element.

ದಾಂಡೇಲಿ: ಸಿವಿಲ್ ನ್ಯಾಯಾಲಯದಲ್ಲಿ ಸಂಪನ್ನಗೊಂಡ ಲೋಕ್ ಅದಾಲತ್

Dandeli, Uttara Kannada | Sep 13, 2025
ದಾಂಡೇಲಿ : ನಗರದ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ತೇಜಸ್ವಿನಿ ಸೊಗಲದ್ ರವರ ನೇತೃತ್ವದಲ್ಲಿ ನಡೆದ ಲೊಕ್ ಅದಾಲತ್ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ರಾಷ್ಟ್ರೀಯ ಮೆಗಾ ಲೋಕ್ ಅದಾಲತ್ ನಲ್ಲಿ 60 ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿದವು. ಒಟ್ಟು 130 ಪ್ರಕರಣಗಳನ್ನು ಸಂಧಾನಕ್ಕೆ ಒಳಪಡಿಸಲಾಗಿತ್ತು. ಪ್ರಮುಖವಾಗಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳು ಇತ್ಯರ್ಥವಾಗಿ ಒಟ್ಟು : 57,36,917/- ರೂ ಗಳನ್ನು ವಸೂಲಾತಿ ಮಾಡಲಾಯಿತು. ನ್ಯಾಯಾಧೀಶರಾದ ತೇಜಸ್ವಿನಿ ಸೊಗಲದ್ ರವರ ನೇತೃತ್ವದಲ್ಲಿ ನಡೆದ ಲೊಕ್ ಅದಾಲತಿನಲ್ಲಿ ಸರಕಾರಿ ಅಭಿಯೋಜಕ ರಮೇಶ ಬಂಕಾಪುರ ಅವರು ಸಹಕರಿಸಿದರು.
Read More News
T & CPrivacy PolicyContact Us