ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ 9 ನೇ ಸುತ್ತಿನಲ್ಲಿ ತಡೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತಡೆಗೋಡೆಯ ಕಲ್ಲುಗಳು ರಸ್ತೆಗೆ ಬಿದ್ದಿದೆ. ಇದನ್ನು ನೋಡಿದ ಸಮಾಜ ಸೇವಕ ಶ್ರೀಕಾಂತ್ ಅವರು ತಡೆಗೋಡೆಯ ಕಲ್ಲುಗಳನ್ನು ಜೊಡಿಸಿ ಮಾನವೀಯತೆ ಮೆರೆದು ವಾಹನ ಸವಾರರು ಹಾಗೂ ಬಸ್ ಗಳು ತಿರುವಿನಲ್ಲಿ ನಿಧಾನವಾಗಿ ಬನ್ನಿ ಎಂದು ಸಲಹೆ ನೀಡಿದರು