ವಿಪಕ್ಷ ನಾಯಕ ಆರ್.ಅಶೋಕ್ ಗೆ ತಲೆ ಕೆಟ್ಟು ಹೋಗಿದೆ, ನಾನು ಬೇಕಾದಷ್ಟು ಜನ ವಿರೋಧಪಕ್ಷದ ನಾಯಕರನ್ನ ನೋಡಿದ್ದೇನೆ, ಆದರೆ ಅಶೋಕ್ ರೀತಿ ಯಾರೂ ಮಾತು ಆಡಲ್ಲ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ನಗರದಲ್ಲಿ ಮಂಗಳವಾರ ಮದ್ದೂರು ಕಲ್ಲು ತೂರಾಟಕ್ಕೆ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, ನಾಳೆದಿನ ಬಿಜೆಪಿ ಅಧಿಕಾರ ಬಂದಾಗ ಇವರು ಇದೇ ತರ ಆಡ್ತಾರ..?? ಅವರವರ ವೈಷ್ಯಮಕ್ಕೆ ಏನೋ ಆಗಿರಬೇಕು ಈಗಾಗ್ಲೆ ಅರೆಸ್ಟ್ ಮಾಡಿದ್ದಾರೆ ಜೈಲಿಗೆ ಹಾಕಿದ್ದಾರೆ ಮುಂದೆ ಗೊತ್ತಾಗುತ್ತೆ ಶಿಕ್ಷೆ ಆಗಲಿ, ವಿರೋಧ ಪಕ್ಷದ ನಾಯಕ ಅವರ ಕರ್ತವ್ಯ ಅವರು ಮಾಡಲಿ, ಅದನ್ನು ಬಿಟ್ಟು ಬಾಯಿಗೆ ಬಂದಾಗೆ ಮಾತನಾಡುವುದು ಸರಿಯಲ್ಲ ಎಂದರು.