ಗ್ಯಾರಂಟಿ ಯೋಜನೆ ಹಿನ್ನೆಲೆಯಲ್ಲಿ ಮಹಿಳಾ ಪ್ರಯಾಣಿಕರನ್ನ ಉಚಿತವಾಗಿ ಕರೆದುಕೊಂಡು ಹೋಗುವ ಹಿನ್ನೆಲೆ ಕೆಎಸ್ಆರ್ಟಿಸಿ ಸಿಬ್ಬಂದಿಗಳೇ ಮಹಿಳಾ ಪ್ರಯಾಣಿಕರಿಗೆ ಮೋಸ ಮಾಡುತ್ತಿರುವ ಘಟನೆ ಎಂದು ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಪ್ಲಾಟ್ಫಾರ್ಮ್ ನಲ್ಲಿ ಬಸ್ ನಿಲ್ಲಿಸದೆ ಬೇರೆ ಜಾಗದಲ್ಲಿ ಬಸ್ ನಿಲ್ಲಿಸಿ ಕೇವಲ ಪುರುಷ ಪ್ರಯಾಣಿಕರನ್ನ ಮಾತ್ರ ಬಸ್ನಲ್ಲಿ ಹತ್ತಿಸಿ ಮಹಿಳಾ ಪ್ರಯಾಣಿಕರಿಗೆ ಮೋಸ ಮಾಡುತ್ತಿರುವ ಘಟನೆ ಎಂದು ಶುಕ್ರವಾರ ಮಧ್ಯಾನ ಬೆಳಕಿಗೆ ಬಂದಿದೆ.