ಬಸವಕಲ್ಯಾಣದಲ್ಲಿ ಅ.10 ರಿಂದ ನಡೆಯುವ ಕಲ್ಯಾಣ ಪರ್ವದಲ್ಲಿ ಹೆಚ್ಚಿನ ಜನ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಲ್ಯಾಣ ಪರ್ವ ಚಿಟಗುಪ್ಪ ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಸಂಗಮೇಶ್ ಜವಾದಿ ಮನವಿ ಮಾಡಿದರು. ಕಾರ್ಯಕ್ರಮ ಹಿನ್ನೆಲೆ ಗುರುವಾರ 5ಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾ.ಬ.ದ ಅಧ್ಯಕ್ಷ ರಾಜಶೇಖರ್ ದೇವಣಿ, ಚಂದ್ರಕಾಂತ್ ತಂಗಾ, ಇಂದುಮತಿ ಗಾರಂಪಳ್ಳಿ ಇದ್ದರು.