ಭಾಲ್ಕಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರದ ಲಾತೂರ, ಉಸ್ಮಾನಾಬಾದ, ಬೀಡ್ ಭಾಗದಲ್ಲಿ ಹೆಚ್ಚಿನ ಮಳೆಯಾದ ಕಾರಣ ತರಣಾ, ಧನೆಗಾಂವ, ಮಾಂಜ್ರಾ ನದಿಯ ನೀರಿನ ಒಳ ಹರಿವು ಮಟ್ಟ ಹೆಚ್ಚಾಗಿದ್ದು, ತಾಲೂಕಿನ ಹಲವು ಗ್ರಾಮಗಳ ಜಮೀನುಗಳು ಜಲಾವೃತ್ತಗೊಂಡು ಬೆಳೆಗಳು ಸಂಪೂರ್ಣ ನಾಶವಾಗಿವೆ. ಹುಲಸೂರನಿಂದ ಕೊಂಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ, ಹಲಸಿತೂಗಾಂವನಿಂದ ಶಾಜನಿಔರಾದ, ಎಲ್ಲಮವಾಡಿಯಿಂದ ವಳಂಡಿಗೆ ಸಂಪರ್ಕಿಸುವ ರಸ್ತೆ ಜಲಾವೃತ್ತಗೊಂಡು ಸಂಪರ್ಕ ಸಂಪೂರ್ಣ ಕಟ್ ಆಗಿದೆ.