ಕಂಪ್ಲಿ ತಾಲೂಕಿನ ಬೆಳಗೋಡು, ಸಣಾಪುರ, ರಾಮಸಾಗರ, ಕೋಟೆ ಸೇರಿದಂತೆ ಅನೇಕ ಗ್ರಾಮಗಳ ಭತ್ತದ ಗದ್ದೆಗಳಲ್ಲಿ ಬಿಎಲ್‌ಬಿ (Bacterial Leaf Blight) ರೋಗ ತಟ್ಟಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸೆಪ್ಟಂಬರ್ 4,ಗುರುವಾರ ಮಧ್ಯಾಹ್ನ 3ಗಂಟೆಗೆ ರೈತ ಕೃಷ್ಣ ರವರ ಭತ್ತದ ಹೊಲಕ್ಕೆ ಭೇಟಿ ನೀಡಿದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಮಾತನಾಡಿ – "ಇತ್ತೀಚಿನ ಹವಾಮಾನದಲ್ಲಿ ಉಂಟಾದ ಏರುಪೇರಿನಿಂದಾಗಿ ಈ ರೀತಿ ರೋಗ ಕಾಣಿಸಿಕೊಂಡಿದೆ. ಶೀಘ್ರದಲ್ಲೇ ಕೃಷಿ ವಿಜ್ಞಾನಿಗಳು ಸ್ಥಳಕ್ಕೆ ಬಂದು ಗದ್ದೆಗಳನ್ನು ಪರಿಶೀಲಿಸಿ, ರೈತರಿಗೆ ತಕ್ಕ ಸಲಹೆ ನೀಡಲಿದ್ದಾರೆ" ಎಂದರು.ಈ ಸಂದರ್ಭದಲ್ಲಿ ಅನೇಕ ರೈತರು ಉಪಸ್ಥಿತರಿದ್ದರು.