ರೈತರ ಭೂಮಿಯ ಸರ್ವೆ ಮಾಡ್ಲಿಕ್ಕೆ ಹೋದಂತಹ ಜಿಬಿಡಿ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಡಿದಿಯ ಕೆಂಪಯ್ಯನ ಪಾಳ್ಯ ಗ್ರಾಮದಲ್ಲಿ ಅಧಿಕಾರಿಗಳಿಗೆ ದಿಗ್ಬಂದನವನ್ನ ಮಾಡಿದ್ದಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ಕೆಂಪಯ್ಯನಪಾಳ್ಯ ಗ್ರಾಮದಲ್ಲಿ ರೈತರ ಜಮೀನುಗಳನ್ನು ಸರ್ವೆ ಮಾಡ್ಲಿಕ್ಕೆ ಹೋಗಿದ್ದರು. ರೈತರು ಅಧಿಕಾರಿಗಳಿಗೆ ದಿಗ್ಬಂಧನವನ್ನು ಮಾಡಿದ್ರು. ಶಂಕರ್ ನಾಯಕ್ ಸ್ಥಳಕ್ಕೆ ತೆರಳಿ ರೈತರ ಮನವೊಲಿಸುವ ಕೆಲಸವನ್ನು ಮಾಡಿದರೂ ಯಾವುದೇ ಪ್ರಯೋಜನವಾಗದೆ ರೈತರು ಸರ್ವೇ ಮಾಡುವುದಕ್ಕೆ ಬಿಡದೆ ಪಟ್ಟು ಹಿಡಿದಿದ್ದರು.