ಗಣೇಶನ ಹಬ್ಬವನ್ನು ದೇಶಾದ್ಯಂತ ಸಂಭ್ರಮ ಸಡಗರದಿಂದ ಆಗಸ್ಟ್ 27ರಂದು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗದಗ ನಗರಕ್ಕೆ ದೂರದ ಊರುಗಳಿಂದ ಗಣೇಶನ ಮೂರ್ತಿಗಳು ಆಗಮಿಸಿವೆ. ಹನುಮನ ವೇಷ ಧರಿಸಿದ ಗಣಪತಿ, ಪ್ರಭು ಶ್ರೀ ರಾಮಚಂದ್ರ, ಶ್ರೀ ವೆಂಕಟೇಶ್ವರ ಅವತಾರ ಹೀಗೆ ನಾನಾ ಅವತಾರಗಳಲ್ಲಿ ಗಣೇಶನನ್ನು ತಯಾರಿಸಲಾಗಿದೆ. ಧಾರವಾಡ, ಹುಬ್ಬಳ್ಳಿ, ಕೊಪ್ಪಳ, ಕುನ್ನೂರು, ಹಾವೇರಿ, ಅಕ್ಕಿ ಆಲೂರು, ಸೇರಿದಂತೆ ದೂರದ ಊರುಗಳಿಂದ ಗಣೇಶನ ಮೂರ್ತಿಗಳು ಆಗಮಿಸಿವೆ.