ಆನ್ ಲೈನ್ ಅಪ್ ನಲ್ಲಿ ಸಾಲ ನೀಡುವುದಾಗಿ ವಂಚಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ. ಕಾಮಗೆರೆ ಗ್ರಾಮದ ರಾಜಪ್ಪ ಮೃತ ದುರ್ದೈವಿ. ಆನ್ ಲೈನ್ ಆ್ಯಪ್ ನಲ್ಲಿ 10 ರಿಂದ 15 ಲಕ್ಷ ಸಾಲ ನೀಡುವುದಾಗಿ ನಂಬಿಸಿ ಈತನಿಂದ ಸುಮಾರು 2.5 ಲಕ್ಷ ರೂ. ಆನ್ ಲೈನ್ ಮೂಲಕ ಹಣ ವರ್ಗಹಿಸಿಕೊಂಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿ ನೇಣಿಗೆ ಶರಣಾಗಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.