ಗಣಪತಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಸಭ್ಯತೆ ಮೆರೆದಿರುವ ವಿಡಿಯೋ ಬೆಳಕಿಗೆ ಬಂದಿದೆ. ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಚತುರ್ಭುಜ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವತಿಯರ ತಂಡದಿಂದ ನೃತ್ಯ ನಡೆಯುತ್ತಿತ್ತು. ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯೊಬ್ಬ ವೇದಿಕೆಗೆ ಹತ್ತಿ ಯುವತಿಯರ ಮೇಲೆ ನೋಟುಗಳ ಮಳೆ ಸುರಿಸಿದ್ದಾನೆ.ಈ ಸಂದರ್ಭದಲ್ಲಿ ಯುವತಿ ಕೈಮುಗಿದು ಬೇಡವೆಂದು ವಿನಂತಿಸಿದರೂ ಆತ ದುಡ್ಡು ಸುರಿಸುವ ವಿಡಿಯೋ ವೈರಲ್ ಆಗಿದೆ. ನೋಟುಗಳನ್ನು ಬೇರೆಯವರು ತೆಗೆದುಕೊಳ್ಳದಂತೆ ಮೂರ್ನಾಲ್ಕು ಯುವಕರು ಕಾವಲಿರುವುದು ದೃಶ್ಯದಲ್ಲಿ ಚಿತ್ರಿತವಾಗಿದೆ. ಈ ದುರ್ವರ್ತನೆಗೆ ಕೆಲ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭ್ಯತೆಯ ಕಾರ್ಯಕ್ರಮ