ಪ್ರವಾದಿ ಮಹಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಶುಕ್ರವಾರ ದಾವಣಗೆರೆ ನಗರದಲ್ಲಿ ಮುಸ್ಲಿಂ ಸಮಾಜ ಬಾಂಧವರು “ಈದ್ ಮಿಲಾದ್” ಹಬ್ಬವನ್ನು ಸಡಗರ, ಸಂಭ್ರಮದಿAದ ಆಚರಿಸಿದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಶುಭ ಹಾರೈಸಿದರು. ನಂತರ ಮೆರವಣಿಗೆಯು ಮುಸ್ತಫಾ ನಗರದಿಂದ ಬಾಷಾ ನಗರ ಮುಖ್ಯರಸ್ತೆ ಮಾರ್ಗವಾಗಿ ಮಂಡಿಪೇಟೆ, ಬಾರ್ ಲೈನ್‌ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಗಾಂಧಿ ವೃತ್ತ, ಕೆಆರ್‌ರಸ್ತೆ, ಶಾಂತಿ ಟಾಕೀಸ್‌ರಸ್ತೆ, ಅರಳಿ ಮರ ವೃತ್ತದ ಮುಖಾಂತರ ಸಾಗಿತು. ಮೆರವಣಿಗೆಯುದ್ದಕ್ಕೂ ಹಸಿರು ಬಾವುಟಗಳನ್ನು ಹಾರಿಸುತ್ತಾ, ಮಕ್ಕಳು, ಯುವಜನರು ಜಯಕಾರ ಹಾಕುತ್ತಾ ಸಾಗಿದರು.