ಮೈಸೂರು: ರಾಷ್ಟ್ರಪತಿಗಳು, ರಾಜ್ಯಪಾಲರನ್ನು ನಮ್ಮ ನಿವಾಸಕ್ಕೆ ಸ್ವಾಗತಿಸಲು ಅಪಾರ ಸಂತೋಷ ಹೆಮ್ಮೆ ಆಯಿತು ರಾಜಮಾತ ಪ್ರಮೋದ ದೇವಿ ಒಡೆಯರ್ ಪತ್ರಿಕಾ ಪ್ರಕಟಣೆ ನಮ್ಮ ಆಹ್ವಾನ ಸ್ವೀಕರಿಸಿ ಬಂದಿದ್ದಕ್ಕೆ ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇವೆ ಬೆಳಗಿನ ಉಪಹಾರಕ್ಕೆ ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ಹಣ್ಣುಗಳನ್ನು ಹಾಗೂ ಮೈಸೂರು ಮಸಾಲೆ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಶ್ಯಾವಿಗೆ, ಉಪ್ಪಿಟ್ಟು, ಸಬ್ಬಕ್ಕಿ ವಡೆ, ಮೈಸೂರು ಪಾಕ್, ಗೋಧಿ ಹಾಲ್ಬಾಯಿ , ಮತ್ತು ಬಾದಾಮಿ ಹಲ್ವಾ ಮಾಡಿಸಲಾಗಿತ್ತು ಅಲ್ಲದೆ ರಾಗಿ ಮತ್ತು ಗೋಧಿ ಬಿಸ್ಕಟ್, ಚಹಾ, ಮತ್ತು ಕಾಫಿ, ಎಲ್ಲವನ್ನೂ ರಾಷ್ಟ್ರಪತಿಗಳ ಆದ್ಯತೆಯ ಅನುಗುಣವಾಗಿ ತಯಾರಿಸಲಾಗಿತ್ತು ರಾಷ್ಟ್ರಪತಿಗಳು ಉಪಹಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.