ಪಟ್ಟಣದಲ್ಲಿ ಇತ್ತಿಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ೪ ವರ್ಷದ ಮನೋಜ್ ಸೋಮಪ್ಪ ಬನ್ನಿ ಎಂಬ ಪುಟ್ಟ ಬಾಲಕನ ಮೇಲೆ ದಾಳಿ ಮಾಡಿದೆ. ಬಾಲಕನ ತಲೆ ಭಾಗಕ್ಕೆ ಬಾಯಿ ಹಾಕಿದ ಸಂದರ್ಭದಲ್ಲಿ ಕಿರುಚಾಡಿದ ಬಾಲಕನ ರೋಧನ ಕಂಡು ಸಾರ್ವಜನಿಕರು ನಾಯಿಯನ್ನು ಹೊಡೆದು ಓಡಿಸಿ ಬಾಲಕನ ರಕ್ಷಿಸಿದ್ದಾರೆ.