ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆದಿದ್ದು ನಮ್ಮ ನಾಡಿನ ಧಾರ್ಮಿಕ ಹಬ್ಬ ದಸರಾ ಉದ್ಘಾಟಿಸಲು ಕನ್ನಡ ಬಾವುಟ, ಭುವನೇಶ್ವರಿ, ಅರಿಶಿನ ಕುಂಕುಮದ ವಿರೋಧಿ ಬಾನು ಮುಸ್ತಾಕ್ ರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದಿರುವ ಉಪಮುಖ್ಯಮಂತ್ರಿಗಳ ಹೇಳಿಕೆಯನ್ನು ಖಂಡಿಸಿ ಇಂದು ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದೇವೆ. ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಸಮಂಜಸ ಆಯ್ಕೆ ಅಲ್ಲ. ಯಾರೇನೆ ಅಂದರೂ ದಸರಾ ಧಾರ್ಮಿಕ ಮೂಲವಾದ ಆಚರಣೆ. ಮೈಸೂರು ಮಹಾರಾಜರುಗಳಿಂದ, ನೂರಾರು ವರ್ಷಗಳ ಹಿಂದೆ ಪ್ರಾರಂಭವಾದ ಧಾರ್ಮಿಕ ನಾಡಹಬ್ಬ ದಸರಾ.