ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಂತೂರು ಗ್ರಾಮದ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಚಾಮರಾಜನಗರ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ ಟಿ ಕವಿತಾ ವಿಶೇಷ ಗಮನ ಸೆಳೆದಿದ್ದಾರೆ. ಕೊಳ್ಳೇಗಾಲ ತಾಲೂಕಿನಾದ್ಯಂತ ಗಸ್ತು ಸಂದರ್ಭ, ಎಸ್ಪಿ ಕವಿತಾ ತಮ್ಮ ಕಾರಿನಲ್ಲಿ ಕುಂತೂರು ಗ್ರಾಮ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ, ರಸ್ತೆಯ ಪಕ್ಕದ ಗದ್ದೆಯಲ್ಲಿ ನಡೆಯುತ್ತಿದ್ದ ನಾಟಿ ದೃಶ್ಯ ಗಮನಿಸಿ ತಕ್ಷಣ ವಾಹನ ನಿಲ್ಲಿಸಿ, ಸ್ವತಃ ಗದ್ದೆಗೆ ಇಳಿದು ಒಂದು ಗಂಟೆಗೂ ಹೆಚ್ಚು ಕಾಲ ಭತ್ತದ ನಾಟಿ ಮಾಡಿದ್ದಾರೆ. ಕೃಷಿಕರ ದಿನನಿತ್ಯದ ಶ್ರಮವನ್ನು ಅನುಭವಿಸಿ, ಅವರೊಂದಿಗೆ ನಾಟಿ ಮಾಡಿದ ಎಸ್ಪಿಯವರ ಈ ಕಾರ್ಯವು ಸ್ಥಳೀಯರ ಹೃದಯ ಗೆದ್ದಿದೆ