ಗಣೇಶ ಹಬ್ಬ ಹಾಗೂ ಈದ್-ಮಿಲಾದ ಹಬ್ಬದ ನಿಮಿತ್ಯ ಬಾಗಲಕೋಟೆ ನಗರ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್, ರಾಪಿಡ್ ಆಕ್ಷನ್ ಪೋರ್ಸ ತಂಡದಿಂದ ಪಥ ಸಂಚಲನ ನಡೆಸಲಾಯಿತು. ಪಥ ಸಂಚಲನವು ಬಾಗಲಕೋಟೆ ಶಹರದ ಸೂಕ್ಷ್ಮ ಪ್ರದೇಶದಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಪಥ ಸಂಚಲನದಲ್ಲಿ ಆರ್‍ಎಎಫ್‍ನ ಡೇಪ್ಯೂಟಿ ಕಮಾಂಡೆಂಟ್ ರಮನಸಿಂಗ್ ಬ್ರೀಷ್ಟ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಉಪವಿಭಾಗಾಧಿಕಾರಿ ಗಜಾನನ ಸುತಾರ, ಶಹರ ಪೊಲೀಸ್ ಠಾಣೆಯ ಇನ್ಸಪೆಕ್ಟರ ಗುರುನಾಥ ಚವ್ಹಾಣ ಪಾಲ್ಗೊಂಡಿದ್ದರು.