ವಿವಾಹ ವಿಚ್ಛೇದನ ಕೋರಿ ಚಾಮರಾಜನಗರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ದಂಪತಿ ಮಗುವಿನ ಭವಿಷ್ಯಕ್ಕಾಗಿ ಒಂದಾಗುತ್ತೇವೆ ಎಂದು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರ ಎದುರು ರಾಜೀ ಸಂಧಾನದ ಮೂಲಕ ಒಂದಾದರು. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ರಾಜಶೇಖರ್ ಮೂರ್ತಿ ಹಾಗೂ ಸುಮಾ ದಂಪತಿ ಕ್ಷುಲ್ಲಕ ಕಾರಣಕ್ಕೆ 2023ರಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಿಂದಲೂ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಅರ್ಜಿದಾರರ ಪರ ವಕೀಲ ಸಿಸಿ ರಮೇಶ್ ಅವರು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಇಬ್ಬರು ಒಂದಾಗುವಂತೆ ಮನವೊಲಿಸಿದ ಕಾರಣ ಒಂದಾದರು.