ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ರೈತರೊಬ್ಬರು ಬೆಳೆದ ಎಲೆಕೋಸು ಕಟಾವಿಗೆ ಬಂದಿದ್ದು, ನಿರಂತರ ಮಳೆ ಹಿನ್ನೆಲೆ ಮಾರಾಟಗಾರರು ಖರೀದಿಗೆ ಬರದ ಕಾರಣ ನಿರೀಕ್ಷಿತ ಬೆಲೆಸಿಗದೆ ಕಂಗಾಲಾಗಿ ಟ್ರ್ಯಾಕ್ಟರ್ ಮೂಲಕ ಫಸಲನ್ನು ಗುರುವಾರ ಸಂಜೆ 5 ಗಂಟೆಗೆ ನೆಲಸಮಗೊಳಿಸಿದರು. ಮಲ್ಲೇಶ್ ಎಂಬುವವರು 1 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ರೂ.80 ಪೈಸೆಯಂತೆ ಸಸಿ ಖರೀದಿಸಿ 60,000 ಸಸಿನೆಟ್ಟು ಎಲೆಕೋಸು ಕೃಷಿ ನಡೆಸಿದ್ದರು. ಕೃಷಿ ಚಟುವಟಿಕೆಗೆ ಸುಮಾರು ರೂ.80,000 ಖರ್ಚು ಮಾಡಲಾಗಿತ್ತು. ಬೆಳೆ ಕಟಾವು ಹಂತಕ್ಕೆ ಬಂದಿತ್ತು ತಿಂಗಳುಕಾಲ ಮಳೆ ಸುರಿದಿದ್ದು ವ್ಯಾಪಾರಕ್ಕೆ ಯಾರೂ ಮುಂದಾಗಲಿಲ್ಲ.