ಇಂದು ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ 70ನೇ ಹುಟ್ಟು ಹಬ್ಬದ ಸಂಭ್ರಮ ಚಿಕ್ಕಬಳ್ಳಾಪುರ ನಗರದಲ್ಲಿ ಮೆಗಾ ಬ್ರದರ್ಸ್ ಫ್ಯಾನ್ಸ್ ಅಸೋಸಿಯೇಶನ್ ವತಿಯಿಂದ ಜಿಲ್ಲಾದಕ್ಷ ರಮೇಶ್ ಅವರ ನೇತೃತ್ವದಲ್ಲಿ ಪಂಚಮುಖಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಕೇಕ್ ಕತ್ತರಿಸಿ ಚಿರಂಜೀವಿಗೆ ಜೈಕಾರ ಹಾಕಿದರು.ನಂತರ ನಗರದ 13 ನೇ ವಾರ್ಡ್ನಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮೆಗಾ ಬ್ರದರ್ಸ್ ಫ್ಯಾನ್ಸ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ರಮೇಶ್ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ದಕ್ಷಿಣ ಭಾರತದಲ್ಲಿ ಅಪಾರ ಬೆಂಬಲಿಗರಿದ್ದು ಅವರು ಕೇವಲ ನಟನೆಗೆ ಸೀಮಿತವಾಗದೆ ಆರೋಗ್ಯ ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲಿ ಕೂಡ ಇದ್ದಾರೆ ಎಂದರು