ಅತೀವೃಷ್ಟಿಯಿಂದ ಬೆಳೆ ಹಾನಿಯಾದ ಶಿಗ್ಗಾಂವ ತಾಲೂಕಿನ ಕೆಲ ಗ್ರಾಮಗಳ ರೈತರ ಜಮೀನುಗಳಿಗೆ ಬಿ.ಜೆ.ಪಿ ಮುಖಂಡರ ನಿಯೋಗ ಭೇಟಿ ಕೊಟ್ಟು ಬೆಳೆಹಾನಿ ವೀಕ್ಷಿಸಲಾಯಿತು. ಗೋವಿನ ಜೋಳ, ಹತ್ತಿ, ಸೊಯಾಬೀನ್ ಮತ್ತು ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು ಈವರೆಗೆ ಸರ್ಕಾರದ ಯಾವ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆಗೆ ಜಮೀನುಗಳಿಗೆ ಭೇಟಿ ಕೊಟ್ಟಿಲ್ಲ. 8 ರಿಂದ 15 ದಿನಗಳ ಕಾಲ ಬಿಸಿಲಿನ ವಾತಾವರಣ ಇದ್ದಲ್ಲಿ ರೈತರು ಜಮೀನುಗಳ ಉಳಿಮೆ ಮಾಡಿ ಮತ್ತೆ ಬೆಳೆ ಬೆಳೆಯುವ ಚಿಂತನೆಯಲ್ಲಿದ್ದಾನೆ. ಆದರೆ ಬಿತ್ತನೆ ಬೀಜ, ಗೊಬ್ಬರ, ಆಳಿನ ಪಗಾರ, ಜಮೀನು ಉಳಿಮೆಗೆ ಹಣವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾನೆ. ಸರ್ಕಾರ ಪರಿಹಾರ ನೀಡುವಂತೆ ಮುಖಂಡರು ಒತ್ತಾಯಿಸಿದರು.