ಆಳಂದ ತಾಲೂಕಿನ ಸುಕ್ಷೇತ್ರ ಬೆಳಮಗಿ ಗ್ರಾಮದಲ್ಲಿ ಇಂದು ಶ್ರೀ ದೇವಿಲಿಂಗ ಮಲ್ಲಿನಾಥ ಆಶ್ರಮದ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ಪೂಜ್ಯ ಹವಾ ಮಲ್ಲಿನಾಥ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮವು ವಿಶೇಷ ವೈಭೋಗದಲ್ಲಿ ನಡೆಯಿತು. ಭಕ್ತರು ದರ್ಶನಕ್ಕೆ ಆಗಮಿಸಿ ಪರಮ ಪೂಜ್ಯರಿಂದ ದರ್ಶನ-ಆಶೀರ್ವಾದ ಪಡೆದು ಪುನಿತರಾದರು. ಭಕ್ತರು ಪೂಜ್ಯ ಹವಾ ಮಲ್ಲಿನಾಥ ಮಹಾರಾಜಾರ ತುಲಾಭಾರ ಸೇವೆಯನ್ನು ಸಲ್ಲಿಸಿದರು.