ವಿರೋಧ ಪಕ್ಷಗಳ ಸುಳ್ಳುಗಳಿಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಉತ್ತರವಾಗಿದೆ ಬೇಕಿದ್ದರೆ ಕಾಮಗಾರಿಗಳ ಬಗ್ಗೆ ನೇರವಾಗಿ ಪರಿಶೀಲನೆ ಮಾಡಲಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಸಿದ್ದವಿದೆ ಅದನ್ನು ಬಿಟ್ಟು ವಿನಾಕಾರಣ ಸುಳ್ಳಿನ ರಾಜಕಾರಣ ಮಾಡಬಾರದು ಎಂದು ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ತಿಳಿಸಿದರು.ತಾಲೂಕಿನ ಮುದುವತ್ತಿ ಗ್ರಾಪಂ ವ್ಯಾಪ್ತಿಯ ಚಿಕ್ಕನಹಳ್ಳಿ ಮಜರಾ ಹನುಮಂತನಗರದಲ್ಲಿ ಶುಕ್ರವಾರ ಶಾಸಕ ಕೊತ್ತೂರು ಮಂಜುನಾಥ್ ಅವರ 30 ಲಕ್ಷ ಅನುದಾನದಲ್ಲಿ ಸಿಮೆಂಟ್ ರಸ್ತೆಗೆ ಗುದ್ದಲಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ ಜನರ ಹಾದಿ ತಪ್ಪಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ ಎಂದ್ರು