ಜಯನಗರ ಶಾಸಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯ್ತು.. ಮೇ 9ರಂದು ಸಂಜೆ 6ಗಂಟೆ ಸುಮಾರಿಗೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಜಯನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ್ರು.. ಪ್ರತಿಭಟನೆ ವೇಳೆ ಶಾಸಕ ರಾಮಮೂರ್ತಿ ಪ್ರತಿಕೃತಿ ದಹನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ರು.. ಈ ವೇಳೆ ಅದನ್ನ ತಡೆದ ಪೊಲೀಸ್ರ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ತಳ್ಳಾಡಿ ವಾಗ್ವಾದ ನಡೆಸಿದ್ರು.. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸ್ರ ಮಧ್ಯೆ ಜಗಳ ಆಯ್ತು.. ಜಗಳ ಗಂಭೀರ ಸ್ವರೂಪ ಪಡೀತಿದ್ದಂತೆಯೇ ಎಲ್ಲರನ್ನೂ ಪೊಲೀಸ್ರು ವಶಪಡೆದ್ರು..