ಹನೂರು:ಬಳಿಯ ರಾಮನಗುಡ್ಡೆ ಕೆರೆಗೆ ನೀರು ತುಂಬಿಸುವ ಮೂಲಕ 950 ಎಕರೆ ಅಚ್ಚುಕಟ್ಟು ಪ್ರದೇಶದ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಿ, ಈ ಭಾಗದ ಕೃಷಿಗೆ ಉತ್ತೇಜನ ನೀಡಲಾಗುವುದು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು ಹನೂರು ಸಮೀಪದರಾಮನಗುಡ್ಡೆ ಕೆರೆ ಆವರಣದಲ್ಲಿ ಅಯೋಜಿಸಿದ್ದ ರೈತರ ಸಭೆಯನ್ನುಉದ್ದೇಶಿಸಿ ಶಾಸಕರು ಮಾತನಾಡಿದರು.1980ರಲ್ಲಿ ಸಣ್ಣ ನೀರಾವರಿ ಇಲಾಖೆಯು ಈ ಕೆರೆಗೆ ನೀರಾವರಿ ಯೋಜನೆ ರೂಪಿಸಿದರೂ, ಅಧಿಕಾರಿಗಳ ಅವೈಜ್ಞಾನಿಕ ಕ್ರಿಯಾಯೋಜನೆಯ ಪರಿಣಾಮವಾಗಿ ಕಳೆದ ಮೂರು ದಶಕಗಳಿನಿಂದ ಕೆರೆ ಸಂಪೂರ್ಣ ಬರಿದಾಗಿರುವುದು ದುಃಖದ ಪರಿಸ್ಥಿತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಇಲ್ಲಿಯ ವಾಸ್ತವವನ್ನು ಅರ್ಥ ಮಾಡಿಕೊಂಡ ದಿನದಿಂದಲೇ, ಕೆರೆಗೆ ಮತ್ತೆ ನೀರು ತುಂಬಿಸಬೇಕೆಂಬ ಹಂಬಲ ಇದೆ ಎಂದರು