ಸಚಿವ ಮಧು ಬಂಗಾರಪ್ಪ ಅವರ ಪಿಎ ಎಂದು ಹೇಳಿಕೊಂಡು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಾಗಿ ವಂಚನೆ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ರಘುನಾಥ್ ಎಂದು ತಿಳಿದು ಬಂದಿದ್ದು, ಈ ಕುರಿತು ಶನಿವಾರ ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.ಸಚಿವರ ಸೊರಬ ಕಚೇರಿಯ ಪಿ ಎ ಎಂದು ಹೇಳಿಕೊಂಡಿದ್ದ ಆರೋಪಿಯು ಅಧಿಕಾರಿಗಳಿಗೆ ನಿಮಗೆ ವರ್ಗಾವಣೆ ಆಗಿದೆ. ಅದನ್ನ ರದ್ದುಪಡಿಸುವುದಾಗಿ ಹೇಳಿದ್ದನು. ಈ ರೀತಿ ದೂರುಗಳು ಬಂದ ಹಿನ್ನೆಲೆ ಸಚಿವರ ಕಚೇರಿಯ ಸೂಚನೆ ಮೇರೆಗೆ ಗಿರೀಶ್ ಎನ್ನುವವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ತನಿಖೆ ಆರಂಭಿಸಿದ ಪೊಲೀಸರು ಆರೋಪಿ ರಘುನಾಥ್ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.