ಪಟ್ಟಣದ ಮಲಪ್ರಭಾ ನದಿಗೆ ಖಾನಾಪೂರ ಪಟ್ಟಣ ಪಂಚಾಯಿತಿ ವತಿಯಿಂದ ಬಾಗಿನ ಅರ್ಪಣೆ. ಖಾನಾಪೂರ ಪಟ್ಟಣದ ಮಲಪ್ರಭಾ ನದಿ ತೀರದಲ್ಲಿ ಖಾನಾಪೂರ ಪಟ್ಟಣ ಪಂಚಾಯತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಗಂಗಾಪೂಜೆ ಹಾಗೂ ನದಿಗೆ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದ್ದರು ಈ ವರ್ಷದ ಬೇಸಿಗೆಯಲ್ಲಿ ಅಕ್ಷರಶಃ ಬತ್ತಿ ಹೋಗಿದ್ದ ಮಲಪ್ರಭಾ ನದಿ ಈಗ ಮರುಜೀವ ಪಡೆದು ಉಕ್ಕಿ ಹರಿಯುತ್ತಿದೆ. ಇದೇ ರೀತಿ ವರ್ಷವಿಡೀ ಮೈದುಂಬಿ ಹರಿಯುವ ಮೂಲಕ ಸಕಲರಿಗೆ ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ ಎಂದು ಪಟ್ಟಣ ಪಂಚಾಯತಿ ನಾಗರಿಕರು ಪ್ರಾರ್ಥಿಸಿದರು