ಕೋಲಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನ ಹಾಲಿ ಶಾಸಕ ಕೊತ್ತೂರು ಜಿ ಮಂಜುನಾಥ್ ನಿರ್ಲಕ್ಷಣೆ ಮಾಡುತ್ತಿದ್ದು ಇದರಿಂದ ಬೇಸತ್ತು ಮಾಜಿ ಸಚಿವ ಆರ್ ವರ್ತೂರು ಪ್ರಕಾಶ್ ರವರ ಜೊತೆ ನರಸಾಪುರ ಹೋಬಳಿಯ ಚಾಕರಾಸನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರು ವರ್ತೂರ್ ಪ್ರಕಾಶ್ ರವರ ಕೈ ಬಲಪಡಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು ಈ ಸಂದರ್ಭದಲ್ಲಿ ಮಂಗಳವಾರ ಮಾತನಾಡಿದ ಮಾಜಿ ಸಚಿವ ಆರ್ ವರ್ತೂರು ಪ್ರಕಾಶ್ ನನಗೆ ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರು ಎರಡು ಬಾರಿ ನನ್ನನ್ನ ವಿಧಾನಸಭಾ ಕ್ಷೇತ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ ನನ್ನ ಜೀವ ಇರೋ ತನಕ ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರನ್ನು ಮರೆಯುವುದಿಲ್ಲ ಎಂದ್ರು