ಆಹಾರ ಅರಸಿ ರಸ್ತೆಗಿಳಿದ ಕಾಡಾನೆಯನ್ನು ಅರಣ್ಯ ಇಲಾಖೆ ಗಸ್ತು ಸಿಬ್ಬಂದಿ ಕಾಡಿಗೆ ಅಟ್ಟುವಾಗ ಅರಣ್ಯ ಇಲಾಖೆ ಜೀಪನ್ನೇ ಅಟ್ಟಾಡಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ನಡೆದಿದೆ. ಕೆಲ ತಿಂಗಳಿನಿಂದ ತರಕಾರಿ ಸಾಗಿಸುವ ವಾಹನಗಳ ಈ ಒಂಟಿ ಸಲಗ ದಾಳಿ ಮಾಡುತ್ತಿದ್ದು ಊಟಿಯಿಂದ ಮೈಸೂರಿಗೆ ತೆರಳುತ್ತಿದ್ದಾಗ ಕಾರಿನ ಸವಾರರು ಈ ದೃಶ್ಯ ಸೆರೆ ಹಿಡಿದಿದ್ದಾರೆ ರಸ್ತೆಗಿಳಿದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಗಸ್ತು ಸಿಬ್ಬಂದಿ ಕಾಡಿಗೆ ಅಟ್ಟಲು ಪಟಾಕಿ ಸಿಡಿಸಿದಾಗ ರೋಷಗೊಂಡ ಆನೆಯು ಇಲಾಖೆ ಜೀಪನ್ನು ಅಟ್ಟಾಡಿಸಿದೆ. ಸದ್ಯ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ..