ಸಾರ್ವಜನಿಕರು ಟ್ಯಾಕ್ಸ್ ಹಣ, ಸರಕಾರದ ಹಣ, ಸಾರ್ವಜನಿಕರ ಓಡಾಟಕ್ಕೆ ಮಾಡುವ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಸಂಘಟನೆಗಳಿಗೆ ಇದೆ, ಸಚಿವರಾದ ಎನ್.ಎಸ್.ಭೋಸರಾಜು ಸಂಘಟನೆಯ ಪದಾಧಿಕಾರಿಗಳಿಗೆ, ಅವಮಾನಕರ ರೀತಿಯಲ್ಲಿ ನಡೆದುಕೊಂಡಿದ್ದು ಸರಿಯಲ್ಲ, ಸಂಘಟನೆಯ ಪದಾಧಿಕಾರಿಗಳಲ್ಲಿ ಕಮೆ ಕೋರಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಪ್ಪ ನಾಯಕ ಹೇಳಿದರು. ಅವರು ಗುರುವಾರ ತಹಶಿಲ್ದಾರರ ಕಚೇರಿಯ ಮುಂದೆ ಸಿರವಾರ-ದೇವದುರ್ಗ ಮುಖ್ಯ ರಸ್ತೆಯ ಅಗಲಿಕರಣ, ಚರಂಡಿ, ಬೀದಿ ದೀಪಾ ಅಳವಡಿಕೆ ಕಾಮಗಾರಿ ೨.೮೫ಕೋಟಿ ಕಾಮಗಾರಿ ಅನುಮೋದನೆ ಪ್ರಕಾರ ರಸ್ತೆಯ ಅಗಲಿಕರಣ ೫೦ಪೀಟ್ ಮಾಡ ಬೇಕು ಎಂದು ಸಿರವಾರ ಅ