ಯಾದಗಿರಿ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಅದ್ದೂರಿ ಮೆರವಣಿಗೆಯನ್ನು ನಡೆಸಲಾಗಿದೆ. ಶುಕ್ರವಾರ ಮಧ್ಯಾನ ರಂಗಂಪೇಟೆಯ ಕಂಚಗಾರಗಲ್ಲಿ ಯಿಂದ ಆರಂಭಗೊಂಡಿರುವ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಮರಳಿ ಅದೇ ಸ್ಥಳದ ವರೆಗೂ ನಡೆಸಲಾಯಿತು. ಮೆಕ್ಕಾ ಮ ದಿನದ ಚಿತ್ರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ,ಭಾಗವಹಿಸಿರುವ ಎಲ್ಲರೂ ಹರ್ಷೋದ್ಘಾರದಿಂದ ಕುಣಿದು ಕುಪ್ಪಳಿಸಿದರು.ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸುರಪುರ ಠಾಣೆಯ ಪಿ ಐ ಉಮೇಶ್ ಎಂ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ ಕೈಗೊಳ್ಳಲಾಗಿತ್ತು.