ಬೀದಿಬದಿ ವ್ಯಾಪಾರಸ್ಥರ ತಾತ್ಕಾಲಿಕ ಮಾರಾಟ ಸಮಿತಿ ರಚನೆ ಅಧ್ಯಕ್ಷರಾಗಿ ಅನ್ಸರ್ ಪಾಷಾ ಆಯ್ಕೆಯಾಗಿದ್ದಾರೆ. ಚಿಂತಾಮಣಿ ನಗರಸಭಾ ಸಭಾಂಗಣದಲ್ಲಿ ಇಂದು ನಗರಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯನ್ನು ರಚನೆ ಮಾಡಲು ಸಲುವಾಗಿ ಇಂದು ನಗರ ಸಭೆ ಪೌರಾಯುಕ್ತ ಜಿ ಎನ್ ಚಲಪತಿ ಹಾಗೂ ಪಟ್ಟಣ ಮಾರಾಟ ಸಮಿತಿಯ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು.ಈ ವೇಳೆ ಮಾತನಾಡಿದ ನಗರಸಭೆ ಪೌರಾಯುಕ್ತರ ಜಿ ಎನ್ ಚಲಪತಿ ಅವರು ಉದ್ಯಮ ಮಂಡಳಿ ಮತ್ತು ಜೀವನ ಉಪಯೋಗ ಇಲಾಖೆ ವತಿಯಿಂದ ಇಂದು ಸ್ಥಳೀಯ ಸಂಸ್ಥೆಗಳು ತಾತ್ಕಾಲಿಕ ಪಟ್ಟಣ ಮಾರಾಟ ಸಮಿತಿಯನ್ನು ಆದೇಶದಂತೆ ನಾವು 12 ಗಂಟೆಗೆ ಸಮಿತಿಯ ಸಭೆಯನ್ನು ಕರೆಯಲಾಗಿತ್ತು ಅದರಂತೆ ಸದಸ್ಯರು ಬಂದಿದ್ದರು,ಈ ಹಿಂದೆ ಅಧ್ಯಕ್ಷರಾಗಿ ಸೂಫಿ ಸಲೀಂ ಅವರು ಇದ್ದರು.