ಕಳೆದ ಒಂದು ವಾರಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆರಾಯ ಬಿಡುವು ನೀಡಿದ್ದ, ಮಂಗಳವಾರ ಸಂಜೆ ಮತ್ತೆ ಮಳೆರಾಯನ ಆರ್ಭಟ ಕೊಪ್ಪಳ ನಗರದಲ್ಲಿ ಜೋರಾಗಿದೆ. ಸಂಜೆ ನಾಲ್ಕು ಗಂಟೆಯಿಂದ ಶುರುವಾದ ಮಳೆರಾಯನ ಆರ್ಭಟ ಅರ್ಧ ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.