ಶಿರಸಿ : ನಗರಸಭೆಯ ಕಟ್ಟಡದ ಹಿಂಭಾಗದಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಶಿರಸಿ ನಗರ ಠಾಣೆಯ ಪೊಲೀಸರು ಭಾನುವಾರ ಸಂಜೆ 6:30 ಗಂಟೆ ಸುಮಾರಿಗೆ ಬಂಧಿಸಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಶಿರಸಿ ಶಿವಾಜಿ ಚೌಕ್ ಹತ್ತಿರದಲ್ಲಿರುವ ನಗರಸಭೆಯ ಹಿಂಭಾಗದಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಧ್ಯಮಕ್ಕೆ ದೊರೆತ ಮಾಹಿತಿ ಪ್ರಕಾರ ಬನವಾಸಿಯ ಪವನ್ ಜೋಗಿ ಎಂಬಾತನೇ ಬಂಧಿತ ವ್ಯಕ್ತಿಯಾಗಿದ್ದಾನೆ ಎಂದು ತಿಳಿದುಬಂದಿದೆ.