ಕಲಬುರಗಿ : ಕಲಬುರಗಿ ನಗರದ ಗಂಜ್ ಪ್ರದೇಶದ ಬ್ಯಾಂಕ್ ಕಾಲೋನಿಯಲ್ಲಿನ ರೆಹಮಾನ್ ಗಾರ್ಡ್‌ನಲ್ಲಿ ಜೂಜಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಎಂಟು ಜನರನ್ನ ಬಂಧಿಸಿದ ಘಟನೆ ನಡೆದಿದ್ದು, ಸೆ5 ರಂದು ಸಂಜೆ 6 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಖಚಿತ ಮಾಹಿತಿ ಮೇರೆಗೆ ರೋಜಾ ಠಾಣೆ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ ಜೂಜಾಡುತ್ತಿದ್ದ ಮೋಯಿಜ್, ಬಾಬರ್, ಯೂನುಸ್, ಪಾಶಾ, ಅನ್ವರ್, ಮಹ್ಮದ್ ಅಜೀಮ್, ಅಮೀರ ಪಾಶಾ ಸೇರಿದಂತೆ ಎಂಟು ಜನರನ್ನ ಪೊಲೀಸರು ಬಂಧಿಸಿದ್ದು, ಬಂಧಿತ ಜೂಜುಕೋರರಿಂದ ₹51 ಸಾವಿರ 40 ರೂ ನಗದು ಹಣ ಸೇರಿದಂತೆ ಇನ್ನಿತರ ವಸ್ತುಗಳನ್ನ ಜಪ್ತಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..