ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಮಹಿಳಾ ಸ್ವಾತಂತ್ರ್ಯದ ಚಿಂತನೆ ಕೊಟ್ಟಿದ್ದು ಅನುಭವ ಮಂಟಪ ಮತ್ತು ಅಕ್ಕಮಹಾದೇವಿ. ಶ್ರೇಣೀಕೃತ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪೂಜಾ ಸ್ವಾತಂತ್ರ್ಯವೂ ಇದ್ದಿಲ್ಲ. ದಶಕಗಳ ಹಿಂದೆ ಮಹಿಳೆಯರಿಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಪ್ರವೇಶ ಮಾಡುವುದಕ್ಕೆ ಪುರುಷ ಪ್ರಧಾನ ಸಮಾಜದಲ್ಲಿ ಅವಕಾಶ ಇದ್ದಿಲ್ಲ. ಆದರೆ ಇವತ್ತು ಮಹಿಳೆಯರಿಗೆ ಆಸ್ತಿ ಹಕ್ಕೂ ಸಹ ಸಿಗುವಂತಾಗಿದೆ ಎಂದು ಸಚಿವ ಡಾ. ಎಚ್. ಕೆ ಪಾಟೀಲ ಹೇಳಿದರು.