ಹನೂರು,:ತಾಲೂಕಿನಮಂಚಾಪುರ ಗ್ರಾಮದಲ್ಲಿ ಪೆರುಮಾಳ್ ಎಂಬಾತನಿಗೆ ಸೇರಿದ ಜಮೀನೊಂದಕ್ಕೆ ಕಾಡು ಹಂದಿಗಳ ದಾಳಿಯಿಂದ ಜೋಳದ ಬೆಳೆ ಸಂಪೂರ್ಣ ನಾಶವಾದ ಕಾರಣ ಆತ್ಮಹತ್ಯೆಯ ಎಚ್ಚರಿಕೆ ನೀಡಿದ್ದಾರೆ. ಪೆರುಮಾಳ್ ಅವರು ತಮ್ಮ ನಾಲ್ಕು ಏಕರೆ ಜಮೀನಿನಲ್ಲಿ ಸಾಲ ಪಡೆದು ಮುಸುಕಿನ ಜೋಳದ ಬಿತ್ತನೆ ಮಾಡಿದ್ದರು. ಬೆಳೆ ಈಗ ಕಟಾವಿಗೆ ತಯಾರಾಗುತ್ತಿರುವ ಹಂತದಲ್ಲಿರುವಾಗಲೇ, ಗುರುವಾರ ರಾತ್ರಿ ಕಾಡು ಹಂದಿಗಳ ಹಿಂಡು ಜಮೀನಿಗೆ ನುಗ್ಗಿ, ಜೋಳದ ತಿಂದು, ತುಳಿದು ಸಂಪೂರ್ಣ ನಾಶಗೊಳಿಸಿದೆ. ಇದರಿಂದ ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿಯಾಗಿದ್ದು, ರೈತ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅರಣ್ಯ ಇಲಾಖೆಯಿಂದ ಅಧಿಕಾರಿಗಳು ಪರಿಶೀಲಿಸಿ ಪರಿಹಾರವನ್ನೂ ನೀಡಲು ವಿಳಂಭ ಮಾಡಿದ್ದೆ ಆದ್ದಲ್ಲಿ ಕ್ರಿಮಿನಾಶಕ ಸೇವಿಸುವ ಎಚ್ಚರಿಕೆ ನೀಡಿದರು