ಒಳಮೀಸಲಾತಿ ತಾರತಮ್ಯ ನೀತಿ ವಿರೋಧಿಸಿ ಬಾಗಲಕೋಟೆ ಜಿಲ್ಲೆಯಮುಧೋಳ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಅಂಬೇಡ್ಕರ್ ಭವನದಿಂದ ಆರಂಭವಾದ ಮೆರವಣಿಗೆಯಲ್ಲಿ ಬೋವಿ ಬಂಜಾರ,ಕೊರಮ,ಕೊರಚ ಸೇರಿದಂತೆ ೬೩ ಉಪಜಾತಿ ಜನರಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ರನ್ನ ವೃತ್ತದಲ್ಲಿ ಬಂದಾಗ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ, ಸಿಮ್,ಡಿಸಿಎಮ್ ಸೇರಿದಂತೆ ವಿವಿಧ ಸಚಿವರ ಭಾವಚಿತ್ರಕ್ಕೆ ಕೆಂಪು ಕ್ರಾಸ್ ಪಟ್ಟಿ ಹಾಕಿ ಧಿಕ್ಕಾರ ಕೂಗಲಾಯಿತು. ರಾಜ್ಯದಲ್ಲಿರೋದು ದಲಿತ ವಿರೋಧಿ ಸರಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.