ಅರಸೀಕೆರೆ :ಇತಿಹಾಸ ಪ್ರಸಿದ್ಧ ಅರಸೀಕೆರೆ ನಗರದ ದೊಡ್ಡ ಗಣಪತಿ ಪ್ರತಿಷ್ಠಾಪನ ಮಹೋತ್ಸವ ಅದ್ದೂರಿಯಾಗಿ ಜರುಗಿತು. ಅರಸೀಕೆರೆ ತಾಲ್ಲೂಕಿನ ದೊಡ್ಡಗಣಪತಿ ಎಂದೇ ಹೆಸರುವಾಸಿಯಾದ ಗಣೇಶ ಮೂರ್ತಿಯನ್ನು ಬುಧವಾರ ಅರಸೀಕೆರೆ ಗಾಂಧಿ ಮೈದಾನದಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ಆಸ್ಥಾನ ಮಂಟಪದಲ್ಲಿ ವಿವಿಧ ವಾದ್ಯತಂಡಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ಪ್ರತಿಷ್ಟಾಪಿಸಲಾಯಿತು. ಈ ಮೇರವಣಿಗೆಯ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಕೆ.ಎಮ್ ಶಿವಲಿಂಗೇಗೌಡರ,ಅರಸೀಕೆರೆ ನಗರ ಸಭೆಯ ಅಧ್ಯಕ್ಷರಾದ ಸಮೀವುಲ್ಲಾ,ಉಪಾಧ್ಯಕ್ಷರಾದ ಮನೋಹರ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.