ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಬಾರಿ ಜೈಲು ಸೇರಿ 28 ದಿನ ಕಳೆದಿದ್ದಾರೆ. ಇದರ ನಡುವೆ ದರ್ಶನ್‌ಗೆ ಜೈಲಲ್ಲಿ ಇರುವ ಟಫ್ ರೂಲ್ಸ್‌ನಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಮಂಗಳವಾರ ಈ ವಿಚಾರವಾಗಿ ಕೋರ್ಟ್‌ನಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡುವ ಬಗ್ಗೆ ಅಧಿಕೃತವಾಗಿ ಸೂಚನೆ ನೀಡಲಾಗಿದೆ. ಇದರಿಂದ ದರ್ಶನ್ ಕೊಂಚಮಟ್ಟಿಗೆ ರಿಲ್ಯಾಕ್ಸ್ ಆಗಿದ್ದಾರೆ. ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ವಿಚಾರಣೆ ನಡೆದಿದ್ದು, ಇದೀಗ ಬುಧವಾರ ನ್ಯಾಯಾಲಯದಲ್ಲಿ ದರ್ಶನ್‌ಗೆ ಕನಿಷ್ಠ ಸೌಲಭ್ಯಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಹಾಗಾಗಿ ದರ್ಶನ್‌ಗೆ ಇಂದು ಎರಡು ಜಮ್ಖಾನ ಹಾಗೂ ಚಾಪೆ, ದಿಂಬನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ.